ಚಿನ್ನದ ಬೆಲೆ ಮತ್ತೆ ಏರಿಕೆ : ಶನಿವಾರ ಬೆಂಗಳೂರಿನಲ್ಲಿ 10 ಗ್ರಾಂ ಬೆಲೆ ಎಷ್ಟಿದೆ? ಬೆಳ್ಳಿ ಕೆಜಿಗೆ ₹2,100 ಜಿಗಿತ

 Gold Price Today : ಭಾರತದ ಮಾರುಕಟ್ಟೆಯಲ್ಲಿ ಕಳೆದ ವಾರ ಕೊಂಚ ಇಳಿಕೆಗೊಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಸತತ ಏರಿಕೆಗೆ ಸಾಕ್ಷಿಯಾಗಿದೆ. ಚಿನ್ನ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯಲ್ಲೂ ಸಹ ವ್ಯತ್ಯಾಸ ಕಾಣಬಹುದು. ಜಾಗತಿಕ ಅನಿಶ್ಚಿತತೆ, ಯುಎಸ್‌-ಭಾರತದ ವ್ಯಾಪಾರದ ಒಪ್ಪಂದ ಅಂತಿಮಗೊಳ್ಳದಿರುವುದು ಸೇರಿದಂತೆ ಅನೇಕ ಕಾರಣಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರತೊಡಗಿದೆ. ಹಾಗಿದ್ರೆ ಶನಿವಾರ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಬೆಳ್ಳಿ ಬೆಲೆ ಕೆಜಿಗೆ ಎಷ್ಟು? ಎಂಬುದನ್ನು ಇಲ್ಲಿ ತಿಳಿಯಿರಿ.



ಹೈಲೈಟ್ಸ್‌:

  • ಭಾರತದ ಮಾರುಕಟ್ಟೆಯಲ್ಲಿ ಇಳಿಕೆಗೊಂಡಿದ್ದ ಬಂಗಾರದ ಬೆಲೆ ಭಾರೀ ಏರಿಕೆ
  • ಬೆಳ್ಳಿ ಬೆಲೆಯಲ್ಲಿ ಒಂದು ಕೆಜಿಗೆ ಸಾಕಷ್ಟು ಏರಿಕೆ ಕಂಡು ಬರುತ್ತಿದೆ
  • ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿನ ಈ ಏರಿಕೆಗೆ ಪ್ರಮುಖ ಕಾರಣವೇನು?




ದೇಶೀಯ ಮಾರುಕಟ್ಟೆ ಅಮೂಲ್ಯ ಲೋಹಗಳ ಬೆಲೆ ಮತಷ್ಟು ಏರಿಕೆಯಾಗತೊಡಗಿದ್ದು, ವೀಕೆಂಡ್‌ ವೇಗ ಪಡೆದುಕೊಂಡಿದೆ. ಹಳದಿ ಲೋಹವು ಭಾರತದಲ್ಲಿ ಬೇಡಿಕೆಯ ನಡುವೆ ಬೆಲೆ ಏರಿಕೆಯು ಆಭರಣ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚಿನ್ನ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯಲ್ಲೂ ಸಹ ಹೆಚ್ಚಳ ಕಂಡುಬಂದಿದ್ದು, ಚಿನ್ನದ ರೀತಿಯಲ್ಲಿ ಜನಸಾಮಾನ್ಯರ ಕೈಗೆಟುಕದ ಹಂತಕ್ಕೆ ಸಾಗುವ ಲಕ್ಷಣ ತೋರಿದೆ.

ಚಿನ್ನದ ಬೆಲೆ ಹೆಚ್ಚಾಗಲು ಕಾರಣವೇನು?

ಯುಎಸ್‌ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸದೇ ನಿಧಾನಗೊಳಿಸಿರುವುದು ಹೂಡಿಕೆದಾರರ ಭಾವನೆಯಲ್ಲಿ ಅನಿಶ್ಚತತೆ ಮೂಡಿಸಿದೆ. ಇದಲ್ಲದೆ ರಷ್ಯಾದ ಕಚ್ಚಾ ತೈಲವನ್ನು ಯಥೇಚ್ಚವಾಗಿ ಆಮದು ಮಾಡಿಕೊಳ್ಳುವ ಭಾರತದ ಮೇಲೆ ಯೂರೋಪಿಯನ್ ಯೂನಿಯನ್, ನ್ಯಾಟೋ ನಿರ್ಬಂಧಗಳನ್ನು ಹೇರುವುದಾಗಿ ಬೆದರಿಕೆಯೊಡ್ಡಿದೆ. ಭಾರತ ಕೂಡ ಈಗಾಗಲೇ ತನ್ನ ಎನರ್ಜಿ ಬೇಡಿಕೆಯು ಮೊದಲ ಆಯ್ಕೆಯಾಗಿದೆ ಎಂದು ತಿರುಗೇಟು ಸಹ ನೀಡಿದೆ. ಇದ್ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಅನಿಶ್ಚತತೆ ತಲೆದೂರಿದ್ದು, ಷೇರು ಮಾರುಕಟ್ಟೆಯಲ್ಲೂ ಸಹ ಪ್ರಾಫಿಟ್ ಬುಕಿಂಗ್ ಕಂಡುಬರುತ್ತಿದೆ. ವಿದೇಶಿ ಬಂಡವಾಳ ಹೂಡಿಕೆದಾರರ ಹೊರಹರಿವು ಸಹ ಹೆಚ್ಚಾಗ್ತಿದೆ.





Post a Comment (0)
Previous Post Next Post